ದಾವಣಗೆರೆ, ಜ. 21- ಹರಿಹರದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರು ನಾಡಿದ್ದು ದಿನಾಂಕ 23ರ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಬಿಸಿ ಊಟ ತಯಾರಕರ ಫೆಡರೇಶನ್‌ನ ಜಿಲ್ಲಾಧ್ಯಕ್ಷ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ಶಾಲೆಯಲ್ಲಿ ಅಡುಗೆ ಕೆಲಸ ಮುಗಿಸಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಹರಿಹರ ತಾಲ್ಲೂಕು ಕಚೇರಿ ಬಳಿ ಬಿಸಿಯೂಟ ತಯಾರಕರು ಜಮಾಗೊಂಡು ಪ್ರತಿಭಟನೆ ನಡೆಸಿ ಬರುವ ಬಜೆಟ್‌ನಲ್ಲಿ ತಮಗೆ ವೇತನ ಹೆಚ್ಚಿಸಬೇಕು ಹಾಗೂ ಮತ್ತಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸುವರು.
ಹರಿಹರ ತಾಲ್ಲೂಕಿನ ಎಲ್ಲಾ ಬಿಸಿಯೂಟ ತಯಾರಕರು ಮಧ್ಯಾಹ್ನ 2 ಗಂಟೆಗೆ ಹರಿಹರದ ತಾಲ್ಲೂಕು ಕಚೇರಿ ಬಳಿ ಆಗಮಿಸಬೇಕೆಂದು ಸಂಘಟನೆ ಮುಖಂಡರುಗಳಾದ ಹನಗವಾಡಿ ಸುಧಾ, ಗುತ್ತೂರು ಮಂಗಳಾ, ಹೊಳೆಸಿರಿಗೆರೆ ವಿನೋದಮ್ಮ, ಗಾಂಧಿ ಮೈದಾನ ಶಾಲೆ ನಾಗಮ್ಮ, ಕಡ್ಲೇಗೊಂದಿ ಸರೋಜ, ಮಲೇಬೆನ್ನೂರು ಪ್ರೇಮ ತಿಳಿಸಿದ್ದಾರೆ.