ದಾವಣಗೆರೆ, ಜ. 16- ಆವರಗೊಳ್ಳ ಗ್ರಾಮದ ಹತ್ತಿರ ಇರುವ ಮಹಾನಗರಪಾಲಿಕೆ ಒಡೆತನದಲ್ಲಿ ರುವ 33 ಎಕರೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕದ ಸರ್ವೇ ನಂ 117/2, 119, 123, 129, 129/1, 129/2, 129/4, 130/1 ಪ್ರದೇಶಗಳು ಸಂಪೂರ್ಣ ವಾಗಿ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಯಾವುದೇ ಅನಧಿಕೃತ ವಾಹನ ಗಳಾಗಲೀ, ವ್ಯಕ್ತಿ ಗಳಾಗಲೀ, ಜಾನು ವಾರುಗಳಾಗಲೀ ಪೂರ್ವಾ ನುಮತಿ ಇಲ್ಲದೇ ಪ್ರವೇಶವಿರುವುದಿಲ್ಲ.
ಒಂದು ವೇಳೆ ಯಾವುದೇ ವ್ಯಕ್ತಿ, ವಾಹನ, ಜಾನುವಾರುಗಳು ಮಹಾ ನಗರ ಪಾಲಿಕೆ ಯ ಅನುಮತಿ ಇಲ್ಲದೇ ಅನಧಿಕೃತವಾಗಿ ಪ್ರವೇಶಿಸು ವುದು ಹಾಗೂ ನುಸುಳಿ ಯಾವುದೇ ರೀತಿಯ ಅನಾಹುತ ಕ್ಕೊಳಗಾದಲ್ಲಿ ಪಾಲಿಕೆ ಜವಾಬ್ದಾರಿಯಾಗಿರು ವುದಿಲ್ಲ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.