ದಾವಣಗೆರೆ ತಾಲ್ಲೂಕು ದೊಡ್ಡಬಾತಿಯಲ್ಲಿ ಕಳೆದ ಎರಡು ದಿನಗಳಿಂದ ಶ್ರೀ ಉಡುಸಲಮ್ಮ ದೇವಿಯ ಜಾತ್ರಾ ಮಹೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಇಂದು ಬೆಳಗಿನ ಜಾವ ಕಣಕದಿಂದ ನಿರ್ಮಿಸಿದ ಕೋಣವನ್ನು ತಳವಾರ ಮನೆಯವರಿಂದ ವಧಿಸುವುದು. ಚರಗದ ಮುಂದೆ ಸಾರು ಹಾಕುವವರು ಕಾಳೇರ ಮನೆಯವರು ಮತ್ತು ಚರಗದಿಂದ ಗ್ರಾಮಕ್ಕೆ ಶಾಂತಿ ಮಾಡುವುದು.ರಾತ್ರಿ 8.30ಕ್ಕೆ ಹುಲುಸಿನ ಜೋಳವನ್ನು ಬಣಕಾರರಿಂದ ಊರ ಗ್ರಾಮಸ್ಥರಿಗೆ ವಿತರಿಸಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.