ಮಾಯಕೊಂಡದಲ್ಲಿ ಇಂದು ನಮ್ಮೂರ ಕನ್ನಡ ಹಬ್ಬ

ಕನ್ನಡ ಯುವಶಕ್ತಿ ಕೇಂದ್ರದ ವತಿಯಿಂದ ನಮ್ಮೂರ ಕನ್ನಡ ಕಾರ್ಯಕ್ರಮವು ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಜಿ. ಜಗದೀಶ್, ಎಸ್.ಆರ್. ಶರಣಪ್ಪ ತಿಳಿಸಿದ್ದಾರೆ.

ಬೆಳಿಗ್ಗೆ 10.30ಕ್ಕೆ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪ್ರಾಧ್ಯಾಪಕರಾದ ಡಾ. ಉಷಾ ಹೆಗಡೆ ಅವರು ಕನ್ನಡ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಸಂಜೆ 4 ಗಂಟೆಗೆ ದಿ. ಸಿ.ಕೆ. ಪುಟ್ಟಲಿಂಗಪ್ಪ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಏರ್ಪಾಡಾಗಿದ್ದು, ಮಾಯಕೊಂಡ ಗ್ರಾ.ಪಂ. ಅಧ್ಯಕ್ಷರಾದ ಲತಾ ಮಲ್ಲಿಕಾರ್ಜುನ ಜಿ.ಆರ್. ಅವರು ಅಧ್ಯಕ್ಷತೆಯಲ್ಲಿ ವಹಿಸಲಿದ್ದಾರೆ.

ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ  ಡಾ. ಭೀಮಾಶಂಕರ್ ಜೋಷಿ  ಅವರಿಂದ ಕನ್ನಡ ನುಡಿ ನಮನ. ಶಾಸಕ ಕೆ.ಎಸ್. ಬಸವಂತಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಪ್ರಾಚಾರ್ಯ ಡಾ. ಸಿ. ಬಸವರಾಜಪ್ಪ, ಪೊಲೀಸ್ ವೃತ್ತ ನಿರೀಕ್ಷಕ ಟಿ. ನಾಗರಾಜ್ ಮುಖ್ಯ ಅತಿಥಿಗಳಾಗಿದ್ದಾರೆ.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. 

ಸಂಜೆ 5.30ಕ್ಕೆ ಗಾಯಕ ಎಸ್. ಸುನಿಲ್ ಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶಾಲಾ – ಕಾಲೇಜು ಮಕ್ಕಳಿಂದ `ಸಂಕ್ರಾಂತಿ ಬಂತು’ ಸಾಂಸ್ಕೃತಿಕ ಕಲರವ ಏರ್ಪಾಡಾಗಿದೆ ಎಂದು ಎಂ.ಜಿ. ಗುರುನಾಥ್, ಸಂಡೂರು ಮಂಜುನಾಥ್ ವಿವರಿಸಿದ್ದಾರೆ.

error: Content is protected !!