ಶ್ರೀ ಶಿವಕುಮಾರಸ್ವಾಮಿ ಮಹಾ ಮಂಟಪ ತರಳಬಾಳು ಬಡಾವಣೆ ಹಾಗೂ ಸಾದರ ನೌಕರರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪ ದಲ್ಲಿ ಶಿವಗೋಷ್ಠಿ-312, ಸ್ಮರಣೆ-89 ಕಾರ್ಯಕ್ರಮವು ಇಂದು ಸಂಜೆ 6.30 ಕ್ಕೆ ನಡೆಯಲಿದೆ.
ಮಾಗನೂರು ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಚಾರ್ಯ ಕೆ. ಸಿದ್ಧನಗೌಡ ಉಜ್ಜಿನಿ ಅವರು `ಬಸವಣ್ಣ ಮತ್ತು ವಚನ ಸಾಹಿತ್ಯ’ ಕುರಿತು ಉಪನ್ಯಾಸ ನೀಡಲಿದ್ದಾರೆ. ನಿವೃತ್ತ ವೈದ್ಯಾಧಿಕಾರಿ ಡಾ. ಎ. ಶಿವನಗೌಡ ಲಿಂಗೈಕ್ಯರ ಸ್ಮರಣೆ ಮಾಡಲಿದ್ದು, ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ಕಾರ್ಯಕ್ರಮ ನಡೆಯಲಿದೆ.