ದಾವಣಗೆರೆ, ಜ. 3- ನಗರದ ಎಂ.ಸಿ.ಸಿ. `ಬಿ’ ಬ್ಲಾಕ್‌ನಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ಮಹೋತ್ಸವ ಮಹೋತ್ಸವ ನಡೆಯಲಿದೆ. ಮುಂಜಾನೆ 6ರಿಂದ ರಾತ್ರಿ 10 ರವರೆಗೆ ಶ್ರೀ ಸ್ವಾಮಿಯ ಅಖಂಡ ದರ್ಶನ ಮತ್ತು ಸರ್ವ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ ಎಂದು ದೇವಸ್ಥಾನದ ಪ್ರಧಾನ ಟ್ರಸ್ಟಿ ಎಂ.ಎನ್. ರಾಮ್‌ಮೋಹನ್ ತಿಳಿಸಿದ್ದಾರೆ.
January 6, 2025