ವಿಕಲಚೇತನ ಫಲಾನುಭವಿಗಳಿಗೆ ರಿಯಾಯಿತಿ ದರದ ಬಸ್ ಪಾಸ್

ದಾವಣಗೆರೆ, ಜ. 3 – ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್‍ಪಾಸ್ (ಹೊಸ, ನವೀಕರಣ) ಗಳನ್ನು ಪಡೆಯಲು ಸೇವಾ ಸಿಂಧು ಫೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸೇವಾ ಸಿಂಧು ಪೋರ್ಟಲ್ ನಲ್ಲಿ  w ನಲ್ಲಿ ಘಟಕ ವ್ಯವಸ್ಥಾಪಕರ ಕೌಂಟರ್ (ಐಡಿ) ಗೆ ಅರ್ಜಿ ಸಲ್ಲಿಸಬಹುದು ಮತ್ತು ಹೊಸ ಪಾಸ್‌ಗಳನ್ನು ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ದಾವಣಗೆರೆ ವಿಭಾಗ ರವರ ಕೌಂಟರ್ (ಐಡಿ) ಗೆ ಅರ್ಜಿ ಸಲ್ಲಿಸಬೇಕು.

ಪಾಸ್ ನವೀಕರಣ ಮಾಡಿಸಿಕೊಳ್ಳುವ ವಿತರಣಾ ಕೇಂದ್ರ : ಜನವರಿ 1 ರಿಂದ ಫೆಬ್ರವರಿ 28 ರವರೆಗೆ ದಾವಣಗೆರೆ ಬಸ್ ನಿಲ್ದಾಣದಲ್ಲಿ ದಾವಣಗೆರೆ, ಜಗಳೂರು, ಚನ್ನಗಿರಿ ಫಲಾನುಭವಿಗಳು ನವೀಕರಣ ಮಾಡಿಸಿಕೊಳ್ಳಬಹುದು.   ಹರಿಹರ ಬಸ್ ನಿಲ್ದಾಣದಲ್ಲಿ ಹರಿಹರ ಫಲಾನುಭವಿಗಳು ಪಾಸ್ ನವೀಕರಣ ಮಾಡಿಸಿಕೊಳ್ಳಬಹುದು ಎಂದು ಕ.ರಾ.ರ.ಸಾ. ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

error: Content is protected !!