ಆತ್ಮಿ ಅಸೋಸಿಯೇಷನ್ ಅರ್ಪಿಸುವ 2ನೇ ಸತ್ವ ಸಂಗಮ ಕಾರ್ಯಕ್ರಮವು ಇಂದು ಸಂಜೆ 5ಕ್ಕೆ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ನಡೆಯಲಿದೆ.
ನಲ್ಲೂರು ಎಸ್. ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯ್‌ಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್, ಬಿ.ಸಿ. ಚಂದ್ರಶೇಖರ್, ಟಿ. ಗಾಯತ್ರಿ, ಕಾತ್ಯಾಯಿನಿ ಸಿ.ಕೆ. ಅನಿಲ್‌ಕುಮಾರ್, ಗಿರೀಶ್ ಹೆಚ್. ಉಪಸ್ಥಿತರಿರವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶುಕ್ಲಾಶೆಟ್ಟಿ, ಚಿಂದೋಡಿ ಮಧುಕೇಶ್, ಆರ್.ಜೆ. ನಾಗೇಂದ್ರ ಪ್ರಕಾಶ್ ಅವರುಗಳಿಗೆ ಆತ್ಮಿ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.