ಹೊನ್ನಾಳಿ, ಡಿ.30- ದುರ್ಗಿಗುಡಿ ಉತ್ತರ ಭಾಗದ ಮಾರಿಕೊಪ್ಪ ರಸ್ತೆ ಬಳಿಯ ದೀಪಾ ನಾಗರಾಜ್ ಅವರ ಮನೆಯಲ್ಲಿ ಸುಮಾರು 3,15,000 ಮೌಲ್ಯದ ಬಂಗಾರ, ನಗದು ಹಣ ಕಳ್ಳತನವಾಗಿರುವ ಘಟನೆ ನಡೆದಿದೆ.
ಬೀಗ ಒಡೆದು ಮನೆಯ ಕಳುವು ಮಾಡಿದ್ದು, 45 ಗ್ರಾಂ ಬಂಗಾರದ ಒಡವೆ, 80 ಗ್ರಾಂ ಹ್ಯಾಂಗಿಂಗ್ಸ್, 6 ಗ್ರಾಂನ ಮೂರು ಉಂಗುರ, ಐವತ್ತು ಸಾವಿರ ನಗದು ಸೇರಿದಂತೆ 2,65,000 ಮೌಲ್ಯದ ಒಡವೆ ಬಂಗಾರ ಕಳ್ಳತನವಾಗಿದ್ದು, ಪಿಎಸ್ಐ ನಿರ್ಮಲ ರವರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವರು.