ಭರಮಸಾಗರ, ಡಿ. 29 – ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭರಮ ಸಾಗರದಲ್ಲಿ ಡಿವಿಎಸ್ ಹಾಗೂ ಎಸ್‌ಎಮ್ಎಲ್ ಗುಂಪಿನಿಂದ ಸಾಲಗಾರ ಕ್ಷೇತ್ರದಿಂದ ಚುನಾವಣೆ ಇಂದು ನಡೆದು ಸಂಜೆ ಫಲಿತಾಂಶವನ್ನು ಚುನಾ ವಣೆಅಧಿಕಾರಿ ಎಸ್.ಎಂ.ಎಲ್ ಗುಂಪು ಜಯಭೇರಿ ಭಾರಿಸಿದೆ ಎಂದು ಘೋಷಣೆ ಮಾಡಿದರು.
ಎರಡೂ ಗುಂಪಿನವರು ಅತಿ ಹೆಚ್ಚು ಶಕ್ತಿ ಮೀರಿ ಪ್ರಚಾರವನ್ನು ಮಾಡಿ ತಮ್ಮ ಪ್ರಭಾವದ ಬಲವನ್ನು ಜನತೆಗೆ ತೋರಿಸುವಲ್ಲಿ ಪ್ರಯತ್ನ ಮಾಡಿದರು.
ಈ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಚುನಾವಣೆಯ ಪ್ರಮುಖ ಪಾತ್ರ ವಹಿಸಿ ತಮ್ಮ ಗೆಲುವಿಗೆ ತುಂಬಾ ಶ್ರಮವನ್ನು ವಹಿಸಿದ್ದರು. ಸಾಲಗಾರ ಕ್ಷೇತ್ರದಿಂದ ಎಚ್. ಕಗ್ಗಲ್ ಗೌಡ, ಎಚ್. ಕೃಷ್ಣಪ್ಪ, ಬಿ.ಜೆ. ಗುರುಮೂರ್ತಿ, ಟಿ.ಆರ್. ಚೆನ್ನೇಶ್, ತಿಪ್ಪಮ್ಮ, ಕೆ.ಜಿ. ತಿಪ್ಪೇಸ್ವಾಮಿ, ಕೆ.ಸಿ. ಮೌನೇಶ್, ಮಂಜುನಾಥ್ ನಾಯಕ್, ಶಮೀಂ ಪಾಷಾ, ಶರಣಮ್ಮ ಎಚ್.ಎನ್. ಹನುಮಂತಪ್ಪ. ಸಾಲಗಾರರಲ್ಲದ ಕ್ಷೇತ್ರದಿಂದ ಡಿ.ಸಿ. ಮಂಜುನಾಥ್ ಜಯಗಳಿಸಿದ್ದಾರೆ.