ಜಿಗಳಿ : ಇಂದು ಬೀರಪ್ಪನ ಕಾರ್ತಿಕೋತ್ಸವ, ನಾಳೆ ಸಾಮೂಹಿಕ ವಿವಾಹ, ದೊಡ್ಡಎಡೆ

ಜಿಗಳಿ ಗ್ರಾಮದ ಒಂಭತ್ತು ಕಟ್ಟೆಯ ಒಡೆಯನಾದ ಶ್ರೀ ಬೀರಲಿಂಘೇಶ್ವರ ಸ್ವಾಮಿಯ ಮಹಾಕಾರ್ತಿಕೋತ್ಸವ ಮತ್ತು ದೊಡ್ಡ ಎಡೆ ಜಾತ್ರೆ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ.

ಇಂದು ರಾತ್ರಿ 9 ಗಂಟೆಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಕಾರ್ತಿಕೋತ್ಸವವು ಭಜನೆ, ಡೊಳ್ಳು ಮತ್ತು ಈರಗಾರರ ಕುಣಿತದೊಂದಿಗೆ ಬಹು ವಿಜೃಂಭಣೆಯಿಂದ ಜರುಗಲಿದೆ. ನಾಳೆ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಜವಳ, 9.30 ರಿಂದ 10.30ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಸಾಮೂಹಿಕ ವಿವಾಹ, ಬಳಿಕ ದೊಡ್ಡ ಎಡೆ ಪೂಜೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ರಟ್ಟಿಹಳ್ಳಿ ಕಬ್ಬಿಣ ಕಂಠಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

error: Content is protected !!