ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಡೈಮಂಡ್ ಜ್ಯೂಬಿಲಿ ವಿದ್ಯಾಪೀಠದ ಶ್ರೀ ಅಜ್ಜಂಪುರ ಗೋವಿಂದಸ್ವಾಮಿ, ಭಾಗ್ಯ ಲಕ್ಷ್ಮಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಕಾಲೇಜು ಹಬ್ಬ ಆಚರಣೆಯನ್ನು ಇಂದು ಮತ್ತು ಆಹಾರ ಮೇಳ ಕಾರ್ಯಕ್ರಮವನ್ನು ನಾಳೆ 14 ರಂದು ಬೆಳಿಗ್ಗೆ 11 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಆರ್.ಎಸ್. ನಾರಾಯಣಸ್ವಾಮಿ, ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್, ಕಾರ್ಯದರ್ಶಿ ಕೆ.ಎನ್. ಅನಂತರಾಮಶೆಟ್ಟಿ, ಖಜಾಂಚಿ ಕಾಸಲ್ ಎಸ್. ಸತೀಶ್, ಕಾಲೇಜಿನ ಛೇರ್‌ಮನ್ ಎ.ಜಿ. ಸೂರ್ಯಪ್ರಕಾಶ್, ಆಡಳಿತಾಧಿಕಾರಿ ಡಾ. ಬಿ.ಪಿ. ಕುಮಾರ್ ಹಾಗೂ ಪ್ರಾಚಾರ್ಯ ಎಸ್. ಪ್ರದೀಪ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.