ಜಿ.ಎಂ.ವಿವಿಯಲ್ಲಿಂದು `ಓಪನ್ ಡೇ’ ಕಾರ್ಯಕ್ರಮ

ದಾವಣಗೆರೆ, ಡಿ. 12- ನಗರದ ಜಿ.ಎಂ. ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಲಭ್ಯತೆ ಮತ್ತು ಪ್ರಗತಿಯ ಹೆಜ್ಜೆ ಗುರುತಿನ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ತಿಳಿಯಬಹುದಾದ `ಓಪನ್ ಡೇ’ ಕಾರ್ಯಕ್ರಮವನ್ನು ನಾಳೆ ದಿನಾಂಕ 13  ಮತ್ತು 14 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಪ್ರೊ.ಟಿ.ಆರ್. ತೇಜಸ್ವಿ ಕಟ್ಟಿಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಮತ್ತೊಬ್ಬ ಸಂಚಾಲಕ ಡಾ.ಟಿ.ಎಂ. ವೀರಗಂಗಾಧರಸ್ವಾಮಿ ಮಾತನಾಡಿ, ಓಪನ್ ಡೇ ಗೆ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು.

ಈ ಎರಡೂ ದಿನಗಳಲ್ಲಿ ಮನರಂಜನೆ ಕಾರ್ಯ  ಕ್ರಮಗಳು ಜರುಗಲಿವೆ. ಎರಡನೇ ದಿನ  ವಿಶೇಷವಾಗಿ ರಾಪರ್ ಸಿಂಗರ್ ರಾಹುಲ್ ಡಿಟ್ ಓ  ಅವರಿಂದ ರಾಪರ್ ಗೀತೆಗಳ ಮನರಂಜನೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ಬಸವರಾಜ್, ಪಿಆರ್‌ಓ ಜಿ.ಎಸ್. ವಸಂತಕುಮಾರ್ ಉಪಸ್ಥಿತರಿದ್ದರು.  

error: Content is protected !!