ದಾವಣಗೆರೆ, ಡಿ. 10 – ಸಂಸತ್ ಭವನದಲ್ಲಿ ಕಲಾಪ ನಡೆಯುವ ವೇಳೆ ಉದ್ಯಮಿ ಅದಾನಿ ಕುರಿತು ಚರ್ಚೆ ಮಾಡಲು ಹಾಗೂ ಪ್ರತಿ ಪಕ್ಷಗಳಿಗೆ ಈ ಕುರಿತು ಮಾತನಾಡಲು ಆಡಳಿತ ಪಕ್ಷ ಅವಕಾಶ ಕಲ್ಪಿಸುತ್ತಿಲ್ಲ ಇದು ಖಂಡ ನೀಯ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
ನವದೆಹಲಿಯ ಸಂಸತ್ ಸದನದಲ್ಲಿ ಕಲಾಪ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್‌ನ ಸಂಸದರು ಅದಾನಿ ಕುರಿತು ಮಾತನಾಡಲು ಅವಕಾಶ ಕೇಳಿದಾಗ ಪ್ರತಿ ಬಾರಿಯೂ ನಿರಾಕರಿಸುವ ಮೂಲಕ ಸ್ವಾತಂತ್ರ್ಯ ಹರಣ ಮಾಡ ಲಾಗುತ್ತಿದೆ. ನೆಪ ಹೇಳುವ ಮೂಲಕ ಕಾಂಗ್ರೆಸ್ ಸಂಸದರನ್ನು ಹತ್ತಿಕ್ಕಲಾಗುತ್ತಿದೆ ಎಂದಿದ್ದಾರೆ.
ಆಡಳಿತ ಪಕ್ಷದ ಕಾರ್ಯ ವೈಖರಿ ಖಂಡಿಸಿ ಕಾಂಗ್ರೆಸ್ ಮೈತ್ರಿಕೂಟದ ಸಂಸದರು ಪ್ರತಿನಿತ್ಯ ಸಂಸತ್ತಿನ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಮೋದಿ ಅದಾನಿ ಏಕ್ ಹೈ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿದೆ. ವಿಶೇಷ ರೀತಿಯಲ್ಲಿ ಮೋದಿ ಹಾಗೂ ಅದಾನಿ ಮಾಸ್ಕ್ ಧರಿಸಿ ಹಾಗೂ ಕಪ್ಪು ಪಟ್ಟಿ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಆದರೂ ಸಂಸತ್‌ನಲ್ಲಿ ಅದಾನಿ ಬಗ್ಗೆ ಮಾತನಾಡಲು ಆಡಳಿತ ಪಕ್ಷ ನಮಗೆ ಅವಕಾಶ ಕಲ್ಪಿಸದಿರುವುದು ದುರಂತ ಎಂದರು.
ಸಂಸತ್ತಿನ ಒಳಗೆ ಮಾತನಾಡಲು ಅವಕಾಶ ಕಲ್ಪಿಸದ ಕಾರಣ ಹೊರಭಾಗ ದಲ್ಲಿ ಪ್ರತಿಭಟನೆ ನಡೆಸಿದರೆ, ಕಾಂಗ್ರೆಸ್ ನವರು ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆಂದು ಪ್ರಭಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.