ದಾವಣಗೆರೆ, ನ. 24 – ನಾಡಿದ್ದು ದಿನಾಂಕ 26 ರಂದು ಪಾಲಿಕೆಯಲ್ಲಿ ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಾಲಿಕೆಯ ಎರಡನೇ ಫ್ಲೋರ್ ಆವರಣದಲ್ಲಿ `ಚದುರಂಗೋತ್ಸವ’ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ನೌಕರರು, ಆಡಳಿತ ವರ್ಗದವರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಹಾಪೌರರಾದ
ಕೆ. ಚಮನ್ ಸಾಬ್ ತಿಳಿಸಿದರು.
January 10, 2025