ಸಂಗಮ ಚಿತ್ರಮಂದಿರದ ಹಿಂಭಾದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದ ಕಾರ್ತಿಕೋತ್ಸವ ಇಂದು ನಡೆಯುತ್ತದೆ. ಸಂಜೆ 5 ಗಂಟೆಗೆ ಮಹಾಲಕ್ಷ್ಮಿ ದೇವಿಯ ಉತ್ಸವ ಮೂರ್ತಿ ಹಾಗೂ ಬಣಗಾರ ಸಮಾಜದ ಆದಿ ಗುರು ಶಂಕರಾಚಾರ್ಯರು ಮತ್ತು ದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ನಂತರ ತುಳಜಾ ಭವಾನಿ ದೇವಸ್ಥಾನದ ಮಹಿಳಾ ಮಂಡಳಿಯಿಂದ ಲಲಿತಾ ಸಹಸ್ರ ನಾಮಾವಳಿ ಪಠಣವು ನಡೆಸಿಕೊಡುವರು. ರಾತ್ರಿ 7.30ಕ್ಕೆ ಮಹಾಲಕ್ಷ್ಮಿ ಮತ್ತು ನವಗ್ರಹ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಲಾಗುವುದು. ನಂತರ ಕಾರ್ತಿಕ ದೀಪೋತ್ಸವ ಹಚ್ಚಲಾಗುವುದು. ನಂತರ ಅನ್ನ ಸಂತರ್ಪಣೆ ನಡೆಯುತ್ತದೆ.
January 15, 2025