ದಾವಣಗೆರೆ, ಅ. 20- ಸೂಪರ್ ಬ್ರೈನ್ ವತಿಯಿಂದ ಇಂದಿನಿಂದ ಇದೇ ದಿನಾಂಕ 30 ರವರೆಗೆ 10 ದಿನಗಳ ಕಾಲ ಹರಿಹರ ತಾಲ್ಲೂಕು ಕೊಂಡಜ್ಜಿಯ ಪರಿಸರದ ಮಡಿಲಲ್ಲಿರುವ ಎಂಎಸ್‌ಎಸ್ ತರಬೇತಿ ಕೇಂದ್ರದಲ್ಲಿ `ಪೋಟೋಗ್ರಫಿ ಮೆಮೋರಿ’ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸೂಪರ್ ಬ್ರೈನ್ ಸಂಸ್ಥಾಪಕ ಡಾ.ಡಿ.ಎಸ್. ಜಯಂತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಬಿರವು ಪ್ರತಿ ದಿನ ಬೆಳಿಗ್ಗೆ 6 ರಿಂದ ಸಂಜೆ 8 ರವರೆಗೆ ನಡೆಯಲಿದ್ದು, ದಾವಣಗೆರೆಯಿಂದ ಕೊಂಡಜ್ಜಿಯವರೆಗೆ ಪ್ರತಿ ದಿನ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಯಾವುದೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದರೂ ಕೇವಲ 10 ದಿನಗಳಲ್ಲಿ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು, ಯಾವುದೇ ಪ್ರಶ್ನೆ ಸಮೇತ ಉತ್ತರಿಸುವಂತಹ ಸಾಮರ್ಥ್ಯ ಬೆಳೆಸುವ ಅತ್ಯಂತ ಪರಿಣಾಮಕಾರಿ ಶಿಬಿರ ಇದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಾಯತ್ರಿ ಚಿಮ್ಮಡ್ ಉಪಸ್ಥಿತರಿದ್ದರು.