ಹೊನ್ನಾಳಿ, ಅ.20- ಸಂತ ಸೇವಾಲಾಲ್ ಮಹಾರಾಜರ ಜನ್ಮ ಸ್ಥಳವಾದ ಸೂರಗೊಂಡನ ಕೊಪ್ಪ ಕ್ಷೇತ್ರವು ಶೀಘ್ರದಲ್ಲೇ ರೈಲ್ವೆ ಸಂಪರ್ಕ ಹೊಂದಲಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಬಂಜಾರ ಸಂಘದ ವತಿಯಿಂದ ಪಟ್ಟಣದ ಗುರು ಭವನದಲ್ಲಿ ಈಚೆಗೆ ಆಯೋಜಿಸಿದ್ದ ಬಂಜಾರ ಸಮಾಜದಿಂದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಆಯ್ಕೆ ಆದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಮುಖಂಡರು ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ, ತಮ್ಮ ಕರ್ತವ್ಯದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಸಮಾಜ ಸ್ಮರಿಸುವ ಉತ್ತಮ ವ್ಯಕ್ತಿಗಳಾಗಬಹುದು ಎಂದರು.
ಬಂಜಾರ ಸಂಘದಿಂದ ಲೋಕ ಸೇವಾ ಆಯೋಗಕ್ಕೆ ಆಯ್ಕೆಯಾದ ಭೋಜ್ಯ ನಾಯ್ಕ್, ತಾಂಡಾಭಿವೃದ್ಧಿ ನಿಗಮದ ಜಯದೇವ ನಾಯ್ಕ, ಉಪವಿಭಾಗಾಧಿಕಾರಿ ಅಭಿಷೇಕ್ ಅವರಿಗೆ ಅಭಿನಂದನೆ ತಿಳಿಸಿದರು.