10ನೇ ತರಗತಿ ವಿಜ್ಞಾನ ಪ್ರಶ್ನೆ ಪತ್ರಿಕೆ ಸಮಸ್ಯೆ

ದಾವಣಗೆರೆ, ಅ.13- ಪ್ರಸ್ತುತ ಪ್ರೌಢಶಾಲೆಯಲ್ಲಿ ಬೋಧಿಸುತ್ತಿರುವ ವಿಜ್ಞಾನ ವಿಷಯದ ಹತ್ತನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳ ಕಠಿಣತೆ ಮತ್ತು ಪ್ರಶ್ನೆ ಪತ್ರಿಕೆಯ ಸ್ವರೂಪದ ಸರಳೀಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಿಂಚನ ಪ್ರೌಢಶಾಲೆಯಲ್ಲಿ ಚರ್ಚಿಸಲಾಯಿತು.

ಜಿಲ್ಲೆಯ ಚನ್ನಗಿರಿ, ಹರಿಹರ, ಜಗಳೂರು, ಹೊನ್ನಾಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ವಲಯದ ಪ್ರೌಢಶಾಲಾ ವಿಜ್ಞಾನ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  ಜಿಲ್ಲಾ ಮಟ್ಟದ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆಯನ್ನು ರಚಿಸಿ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು.

ಜಿಲ್ಲಾ ಸಂಘದ ಗೌರವ ಅಧ್ಯಕ್ಷರಾಗಿ  ಶಿವಮೂರ್ತಿ ಕೆ, ಅಧ್ಯಕ್ಷರಾಗಿ  ರಾಮಚಂದ್ರಪ್ಪ ಡಿ.ಜಿ., ಉಪಾಧ್ಯಕ್ಷರಾಗಿ   ಜಹಾನ್ ಅರಾ ಬೇಗಂ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಧರಮಯ್ಯ ಎಂ.ಎನ್‌. ಮತ್ತು  ಭೀಮಪ್ಪ ಹೆಚ್.ವಿ., ಕೋಶಾಧ್ಯಕ್ಷರು ಗಳಾಗಿ ಪುಷ್ಪ ಕುಮಾರ್ ಕೆ. ಮತ್ತು ರುದ್ರಪ್ಪ ವೈ. ಸಂಘಟನಾ ಕಾರ್ಯದರ್ಶಿ ಗಳಾಗಿ ಮಂಜುನಾಥ ಸಾಹುಕಾರ್ ಮತ್ತು  ಮಂಜುನಾಥ್ ಜೋಗಪ್ಪ ನವರ್, ಮಾಧ್ಯಮ ಸಂಪನ್ಮೂಲ ತಂಡದ ಸದಸ್ಯರಾಗಿ ಕೃಷ್ಣಮೂರ್ತಿ ಎಚ್., ಸಿದ್ದೇಶ್ ಟಿ.,  ಶ್ರೀನಿವಾಸ ಬಿ., ಸಂತೋಷ್ ನೂಲಗೇರಿ, ಯೋಗೀಶ್ ಕೆ .ಎಂ. ಅವರುಗಳನ್ನು ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ನಿಂಚನ ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಿಂಗಪ್ಪ ಅಧ್ಯಕ್ಷೀಯ ನುಡಿಗಳನ್ನಾಡಿ, ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ನೀಡುತ್ತಿರುವ ಹತ್ತನೇ ತರಗತಿಯ ಪ್ರಶ್ನೆ ಪತ್ರಿಕೆಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಕಠಿಣಕರ ಹಾಗೂ ಗೊಂದಲದಿಂದ ಕೂಡಿರುತ್ತವೆ. ಹಾಗಾಗಿ ಈ ರೀತಿ ಸಂಘಟನೆಯ ಮೂಲಕ ಹೋರಾಟ ಮಾಡುವುದು ಸೂಕ್ತ ಎಂದರು.  ಶಾಲೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಶೃತಿ ಇನಾಂದಾ‌ರ್ ಈ ಸಂದರ್ಭದಲ್ಲಿದ್ದರು.

error: Content is protected !!