ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ
ಹರಪನಹಳ್ಳಿ, ಸೆ.30- ಸಂಸ್ಕಾರವನ್ನು ಹೊಂದಿರು ವುದೇ ಗುಣ ಮಟ್ಟದ ಶಿಕ್ಷಣ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರು ಷೋತ್ತಮಾ ನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಉಪ್ಪಾರ ನೌಕರರ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ್ತಿ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ನೀಡಲಾದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜ್ಞಾನವನ್ನು ಒಂದು ಸಾರಿ ಪಡೆದುಕೊಂಡರೆ, ಬಂಡೆಗಲ್ಲಿನ ಹಾಗೆ ಅದು ಗಟ್ಟಿ ಆಗುತ್ತದೆ, ನಾವು ಇರುವವರೆಗೂ ನಮ್ಮ ಜೊತೆಗಿರುತ್ತದೆ, ವಿದ್ಯೆ ಪಡೆದ ಜ್ಞಾನಿಗಳು ಎಲ್ಲರಿಂದಲೂ ಗೌರವ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಲೇಪಾಕ್ಷಪ್ಪ ವಿಶೇಷ ಉಪನ್ಯಾಸ ನೀಡಿ, ಇದು ಸ್ಫೂರ್ತಿ ನೀಡುವಂತಹ ಕಾರ್ಯಕ್ರಮವಾಗಿದ್ದು, ನಾವು ವಿಚಾರ ವಂತರು, ಬುದ್ಧಿವಂತರು ಮತ್ತು ಸೃಜನಶೀಲರಾದಾಗ ಮಾತ್ರ ಸುಸಜ್ಜಿತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ರಾಜ್ಯ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎಸ್. ಎನ್. ಚಂದ್ರಪ್ಪ ಮಾತನಾಡಿ, ಪ್ರತಿ ವರ್ಷ ನಾನು ಉಪ್ಪಾರ ಸಮಾಜದ ಬಡ ಮಕ್ಕಳಿಗೆ 1 ಲಕ್ಷ ರೂ. ಗಳಷ್ಟು ಪುಸ್ತಕಗಳನ್ನು ನೀಡುತ್ತಿದ್ದೇನೆ ಎಂದರು.
ಡಾ. ಉಮೇಶ್ ಬಾಬು ಅವರು ತಾಲೂಕು ಉಪ್ಪಾರ ನೌಕರರ ಸಂಘಕ್ಕೆ 50ಸಾವಿರ ರೂ.ಗಳ ಚೆಕ್ಕನ್ನು ನೀಡಿದರು.ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಸಂಗಪ್ಪನವರ ಮಾತನಾಡಿ. ತಬ್ಬಲಿ ಸಮುದಾಯ ಗಳು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಎಂದರು.
ನೌಕರ ಸಂಘದ ಅಧ್ಯಕ್ಷ ಕೆ. ಅಂಜನಪ್ಪ, ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಂ. ಮಂಜುಳಾ, ಉಪ್ಪಾರ ಸಮಾಜದ ಅಧ್ಯಕ್ಷ ಟಿ.ತಿಮ್ಮಪ್ಪ, ಕೆ ತಿಮ್ಮಪ್ಪ, ಸವಿತಾ ಎಂ, ಪಿ. ಗಣೇಶ, ಅಂಜಿನಪ್ಪ, ಪಿ. ಸುಮಾ, ಬಸವರಾಜ್ ಸಂಗಪ್ಪ ನವರು, ಕಾಡಜ್ಜಿ ಮಂಜುನಾಥ, ಎಸ್. ರಾಮಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಶೇಖರ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಚಂದ್ರಮೌಳಿ, ಸುಭದ್ರಮ್ಮ, ಕೆ. ಶೈಲಜಾ, ಕಬ್ಬಳ್ಳಿ ಗೀತಾ, ಗಿರಿಜಾ, ಲಕ್ಷ್ಮಿ ದೇವಿ, ನಾಗರಾಜ್ ಯು, ಹುಚ್ಚಪ್ಪ ಬಣಕಾರ್, ಬಸವರಾಜ, ರಾಮಚಂದ್ರಪ್ಪ, ಪ್ರಕಾಶ ಮತ್ತಿತರರು ಉಪಸ್ಥಿತರಿದ್ದರು.