ದಾವಣಗೆರೆ, ಸೆ.23- ದೂಡಾ ಮಾಜಿ ಅಧ್ಯಕ್ಷರೂ, ಜೆಡಿಎಸ್ನ ಮಾಜಿ ಜಿಲ್ಲಾಧ್ಯಕ್ಷರೂ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡರೂ ಹಾಗೂ ಹಿರಿಯ ಕುಸ್ತಿಪಟುಗಳೂ ಆದ ಟಿ.ದಾಸಕರಿಯಪ್ಪ ಅವರ ನಿಧನಕ್ಕೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದೇಶ್ವರ ಅವರು, ದಾಸಕರಿಯಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
February 23, 2025