ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಆರ್.ಜಿ. ಶ್ರೀನಿವಾಸಮೂರ್ತಿ ಅವರ ಹುಟ್ಟುಹಬ್ಬ ಆಚರಣೆ, ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಹಾಗೂ ವಿಕಲಚೇತನ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಲಯನ್ಸ್ ಭವನದಲ್ಲಿ ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸಮಾರಂಭ ಉದ್ಘಾಟಿಸಲಿದ್ದು, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಿವಾಕರ್ ಶೆಟ್ಟಿ, ರಾಜೀವ್ ಕೋಟ್ಯಾನ್, ಜಿ. ಕೊಟ್ರೇಶ್, ಅತಿಥಿಗಳಾಗಿ ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಎಲ್. ಪ್ರಭಾಕರ್, ಕೆ.ಎನ್. ಅನಂತರಾಮ್, ವೈ.ಬಿ. ಸತೀಶ್, ಎ.ಎನ್. ಮದನ್‌ಕುಮಾರ್ ಭಾಗವಹಿಸುವರು.