ಚನ್ನಗಿರಿ, ಸೆ.1- ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಚನ್ನಗಿರಿಯ ವಿ.ಆರ್. ಬಡಾವಣೆಯ ತೌಫಿಕ್ ಅಹ್ಮದ್ ಹಾಗೂ ಮೊಹಮ್ಮದ್ ತೌಹೀದ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.
ಚನ್ನಗಿರಿ ಕಡೆಯಿಂದ ಅಜ್ಜಿಹಳ್ಳಿ ಗ್ರಾಮದ ಕಡೆ ಹೋಗುವಾಗ ಬೈಕ್ ಸವಾರ ತನ್ನ ಬೈಕ್ ಹಿಂಬದಿಯಲ್ಲಿ ಇನ್ನೊಬ್ಬನನ್ನು ಕೂರಿಸಿಕೊಂಡು ವೇಗವಾಗಿ ಚಾಲನೆ ಮಾಡುತ್ತಾ ಕೇಕೆ ಹಾಕುತ್ತಾ, ಬೈಕ್ ಮುಂದಿನ ಗಾಲಿ ಹಾರಿಸಿಕೊಂಡು ಬೈಕ್ ವ್ಹೀಲಿಂಗ್ ಮಾಡುತ್ತಾ, ರಸ್ತೆಯಲ್ಲಿನ ಇತರೆ ವಾಹನ ಸವಾರರಿಗೆ ತೊಂದರೆ ಮಾಡುತ್ತಿದ್ದ. ಈ ವೇಳೆ ಅವನನ್ನು ತಡೆದು ದಾಖಲೆ ಕೇಳಿದಾಗ ಯಾವುದೇ ದಾಖಲೆಗಳಿರಲಿಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ ಇವರ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.