ಮಲೇಬೆನ್ನೂರು, ಸೆ.1- ಹರಿಹರ ತಾಲ್ಲೂಕು ಕುರುಬರ ಸಂಘದ ವತಿಯಿಂದ ಈ ತಿಂಗಳ ಕೊನೆಯಲ್ಲೇ ಶೈಕ್ಷಣಿಕ ಪುರಸ್ಕಾರ ಮತ್ತು ಸಮಾಜದ ಹಿರಿಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಪೂಜಾರ ಹಾಲೇಶಪ್ಪ ತಿಳಿಸಿದ್ದಾರೆ.
ಆದ್ದರಿಂದ ಹರಿಹರ ತಾಲ್ಲೂಕಿನ ಗ್ರಾಮಾಂತರ ವಿದ್ಯಾರ್ಥಿಗಳು 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 75 ಕ್ಕಿಂತ ಅಧಿಕ ಅಂಕ ಮತ್ತು ಹರಿಹರ ನಗರದ ವಿದ್ಯಾರ್ಥಿಗಳು ಶೇ. 85 ಕ್ಕಿಂತ ಅಧಿಕ ಅಂಕ ಗಳಿಸಿರಬೇಕು. ಅಂತಹ ವಿದ್ಯಾರ್ಥಿಗಳು ತಮ್ಮ ವಿಳಾಸ ಹಾಗೂ ಮೊಬೈಲ್ ನಂಬರ್ ಮತ್ತು ಅಗತ್ಯ ದಾಖಲೆಗಳೊಂದಿಗೆ ಇದೇ ದಿನಾಂಕ 20 ರೊಳಗಾಗಿ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ಹಾಲೇಶಪ್ಪ ಮನವಿ ಮಾಡಿದ್ದಾರೆ.
ವಿವರಕ್ಕೆ ಸಂಪರ್ಕಿಸಿ : ತಿಪ್ಪಣ್ಣ ಕಬ್ಬಾರ್ (8151827429), ಡಿ.ಕೆ. ಕರಿಬಸಪ್ಪ (9901907658), ಕೃಷ್ಣಮೂರ್ತಿ (8147603987), ಡಾ. ಕರಿಬಸಯ್ಯ ಮಠದ (9880630199), ಎಸ್. ರಾಜಪ್ಪ (9901651239).