ದಾವಣಗೆರೆ, ಆ. 26 – ನಗರದ ಶಾಮನೂರು ಬ್ರಿಡ್ಜ್ ಕೆಳಗಡೆ ಬಿಕ್ಷೆ ಬೇಡುತಿದ್ದ ಸಮಾರು 40 ರಿಂದ 45 ವರ್ಷದ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಕಪ್ಪು ಮೈ ಬಣ್ಣ, ತೆಳ್ಳನೆಯ ಮೈಕಟ್ಟು, ಹಸಿರು ಬಣ್ಣದ ಬ್ಲೌಸ್, ಆರೆಂಜ್ ಕಲರ್ ಸೀರೆ ಧರಿಸಿರುತ್ತಾಳೆ. ಮುಖದಲ್ಲಿ ಕಪ್ಪು ಗುರುತು ಇರುತ್ತದೆ. ವಾರಸುದಾರರ ಮಾಹಿತಿ ತಿಳಿದು ಬಂದಲ್ಲಿ ದೂರವಾಣಿ 08192-262688, 9480803251 ಗೆ ಕರೆ ಮಾಡಿ ತಿಳಿಸಲು ವಿದ್ಯಾನಗರ ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
December 22, 2024