ಹೆಸರಾಂತ ಹಿನ್ನೆಲೆ ಗಾಯಕರಾಗಿದ್ದ ದಿ.ಮಹಮ್ಮದ್ ರಫಿ ಅವರು ಇಹಲೋಕ ತ್ಯಜಿಸಿ 44 ವರ್ಷಗಳು ಗತಿಸಿವೆ. ಅವರ ಸ್ಮರಣಾರ್ಥ ‘ತುಮ್ ಮುಜೇ ಯುಂ ಭೋಲಾನಾ ಪಾವೋಗೆ’ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಾವಣ ಗೆರೆ ಮೆಲೋಡಿ ಮೇಕರ್ಸ್ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಆಯಿಷಾ ಶಾದಿ ಮಹಲ್‌ನಲ್ಲಿ ಇಂದು ಸಂಜೆ 5 ಗಂಟೆಗೆ ಪ್ರಾರಂಭಗೊಳ್ಳಲಿದೆ. ಹೈದರಾಬಾದಿ ಗಾಯಕಿ ಚಾಂದನಿ, ಸ್ಥಳೀಯ ಕಲಾವಿದರಾದ ಡಾ.ಅನೀಸ್, ಎ.ಬಿ. ಜಬೀವುಲ್ಲಾ, ಸಲ್ಮಾನ್, ಶಿಲ್ಪ, ರಿಯಾಜ್, ಅಲಿ ಹಾಡಲಿದ್ದಾರೆ. ಪತ್ರಕರ್ತ ಬಿ. ಸಿಕಂದರ್, ಹಿರಿಯ ಕಲಾವಿದರಾದ ಸುಲ್ತಾನ್ ಸಾಬ್, ವಾಜೀದ್ ಸಾಬ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಸಿಂಗರ್ ಅಲಿ ತಿಳಿಸಿದ್ದಾರೆ.
March 12, 2025