ಖೋಟಾ ನೋಟು ಚಲಾವಣೆ ಮಾಡಿದ ಆರೋಪಿಗಳಿಗೆ 5 ವರ್ಷ ಶಿಕ್ಷೆ

ಹರಿಹರ, ಜು. 31 – ನಗರದ ತರಕಾರಿ ಮಾರುಕಟ್ಟೆಯಲ್ಲಿ  ಫಕೃಸಾಬ್ ತಂದೆ ಲೇಟ್ ರಾಜ್‌ಸಾಬ್ ದಿನಾಂಕ 19.6.2019 ರಂದು ತೆಂಗಿನ ಕಾಯಿ ವ್ಯಾಪಾರ ಮಾಡುವಾಗ ಹನುಮಂತಪ್ಪ ಮತ್ತು ಪತ್ನಿ ಶಾಂತಾ ಅವರು ಕಾಯಿ ಪಡೆದು ಖೋಟಾ ನೋಟು ನೀಡಿದ್ದರಿಂದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರಿಗೆ ನ್ಯಾಯಾಲಯವು 5 ವರ್ಷ ಸಾಧಾರಣ ಶಿಕ್ಷೆ ಮತ್ತು ತಲಾ 30 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಚನ್ನಗಿರಿ ತಾಲ್ಲೂಕು ನವಿಲೇಹಾಳ್ ಗ್ರಾಮದ ಹನುಮಂತಪ್ಪ ತಂದೆ ಮೈಲಪ್ಪ ಮತ್ತು ಆತನ ಹೆಂಡತಿ ಶಾಂತ ಎಂುಬವರು ತೆಂಗಿನ ಕಾಯಿ ತೆಗೆದುಕೊಂಡು 2,000 ರೂ. ಮುಖ ಬೆಲೆಯ ನೋಟನ್ನು ನೀಡಿದ್ದು, ತೆಂಗಿನ ಕಾಯಿ ವ್ಯಾಪಾರಿಗೆ ಅನುಮಾನ ಬಂದಿದ್ದರಿಂದ ಬೇರೆ ನೋಟು ಕೇಳಲಾಗಿ 500 ರೂ. ಮುಖ ಬೆಲೆಯ ನೋಟನ್ನು ನೀಡಿದ್ದರು. ಅದೂ ಸಹ ಖೋಟಾನೋಟು ಎಂಬ ಅನುಮಾನದಿಂದ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು.  

ಹರಿಹರದ ಸಿಪಿಐ ಐ.ಹೆಚ್. ಗುರುನಾಥ ಅವರು ತನಿಖೆ ನಡೆಸಿ, ಕೃತ್ಯಕ್ಕೆ ಉಪಯೋಗಿಸಿದ ಕಲರ್ ಜೆರಾಕ್ಸ್ ಪ್ರಿಂಟರ್ ಮತ್ತು ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡರು. ಅರೋಪಿಗಳ ವಿರುದ್ದ ನ್ಯಾಯಾಲಯಕ್ಕೆ  ದೋಷರೋಪಣೆ ಪಟ್ಟಿ ಸಲ್ಲಿಸಿದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಆರ್.ಎನ್. ಪ್ರವೀಣಕುಮಾರ್ ಆರೋಪಿತರ ಮೇಲೆ ಆರೋಪ ಸಾಬೀತಾಗಿದ್ದರಿಂದ  ಆರೋಪಿತರಿಗೆ 5 ವರ್ಷ ಸಾಧಾರಣ ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಕೀಲ  ಜಯ್ಯಪ್ಪ ನ್ಯಾಯ ಮಂಡನೆ ಮಾಡಿರುತ್ತಾರೆ. 

ತನಿಖಾಧಿಕಾರಿ ಐ.ಹೆಚ್. ಗುರುನಾಥ, ಸರ್ಕಾರಿ ವಕೀಲ  ಜಯ್ಯಪ್ಪ ಅವರ ಕಾರ್ಯವನ್ನು  ಪೊಲೀಸ್ ಅಧೀಕ್ಷಕ ಶ್ರೀಮತಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ  ವಿಜಯಕುಮಾರ ಎಂ. ಸಂತೋಷ ಮತ್ತು ಜಿ. ಮಂಜುನಾಥ ಅವರು ಶ್ಲ್ಯಾಘಿಸಿದ್ದಾರೆ.

error: Content is protected !!