ಹರಿಹರ, ಜು. 19- ನಗರದ ಜೆ.ಸಿ.ಬಡಾವಣೆ 1 ನೇ ಮೇನ್, 1 ಕ್ರಾಸ್ನಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಾಡಿದ್ದು ದಿನಾಂಕ 21 ರ ಭಾನುವಾರ `ಗುರು ಪೂರ್ಣಿಮೆ’ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 6 ರಿಂದ 7 ರವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ದಿವ್ಯತ್ವಯರ ಅಷ್ಟೋತ್ತರ ಪಠಣ, 7 ರಿಂದ 8 ರವರೆಗೆ ವಿಶೇಷ ಪೂಜೆ, 9.45 ರಿಂದ 11 ಹೋಮ ಸ್ವಾಮಿ ಕರುಣಾನಂದಜೀ ಮಹಾರಾಜ್ ಅವರಿಂದ, 11 ರಿಂದ 11.20 ತ್ರಿವೇಣಿ ಸಿ.ಎನ್. ಚಿರಡೋಣಿ ಅವರಿಂದ ಭಜನೆ, 11.20 ರಿಂದ 12 ಸ್ವಾಮಿ ಶಾರದೇಶಾನಂದ ಜೀ ಇವರಿಂದ ಭಜನೆ, 12 ಕ್ಕೆ ಡಾ. ಶಾರದಾದೇವಿ ಆರ್.ಹೆಚ್.ಇವರಿಂದ `ಗುರು ಪೂಣಿಮೆಯ ಮಹತ್ವ’ ಕುರಿತು ಉಪನ್ಯಾಸ, 12.25 ಕ್ಕೆ ಸ್ವಾಮಿ ಶಾರದೇಶಾನಂದ ಜೀ ಇವರಿಂದ `ಶ್ರೀ ಗುರು ಮಹಿಮೆ’ ಕುರಿತು ಉಪನ್ಯಾಸ, ನಂತರ 12.55 ಕ್ಕೆ ಮಹಾಮಂಗಳಾರತಿ, ಮಹಾಪ್ರಸಾದ ವಿತರಿಸಲಾಗುವುದು.