ದಾವಣಗೆರೆ, ಜು.19- ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ – ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆ, ವ್ಯಾಪಾರ, ಕೈಗಾರಿಕೆ ಮತ್ತು ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಾದ `ಪದ್ಮ ವಿಭೂಷಣ, `ಪದ್ಮ ಭೂಷಣ ಮತ್ತು `ಪದ್ಮಶ್ರೀ’ ಪ್ರಶಸ್ತಿಗೆ ಅರ್ಜಿ ಆಹ್ವಾನಿ ಸಲಾಗಿದೆ. padmaawards.gov.in ಈ ವೆಬ್ ಸೈಟ್‌ನಲ್ಲಿ ಪ್ರಶಸ್ತಿಗೆ ಅನ್ವಯಿಸುವ ನಿಯಮಗಳಿವೆ. ಅರ್ಹರು ಈ ಇ-ಮೇಲ್ ವಿಳಾಸವಾದ [email protected] ಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 31 ಕೊನೆ ದಿನವಾ ಗಿದೆ. ಮಾಹಿತಿಗಾಗಿ 08192-237480 ಸಂಪರ್ಕಿಸಿ.
January 15, 2025