ದಾವಣಗೆರೆ, ಜು.19- ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಮತ್ತು ಗಾಯತ್ರಿ ಪರಿವಾರದಿಂದ ನಗರದ ಜಯದೇವ ವೃತ್ತದಲ್ಲಿನ ಶ್ರೀ ಶಂಕರ ಮಠದಲ್ಲಿ ಇದೇ ದಿನಾಂಕ 21ರ ಬೆಳಗ್ಗೆ 7ಕ್ಕೆ ಗುರು ಪೂರ್ಣಿಮೆ ಅಂಗವಾಗಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಧ್ಯಾತ್ಮ ಸಮಾರಂಭದ ಪೂಜಾ ಸೇವಾಕರ್ತರು ಡಾ. ರಮೇಶ್ ಪಟೇಲ್ ಮತ್ತು ಕುಟುಂಬದವರಾಗಿ ದ್ದಾರೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.