ಹರಿಹರ, ಜು,17- ಬೆಂಗಳೂರು ಬನ್ನೇರುಘಟ್ಟ, ದೇವರ ಚಿಕ್ಕನಹಳ್ಳಿ ಬಡಾವಣೆ ನಿವಾಸಿ ಎನ್ನಲಾದ ಮಾರುತಿ (57) ಎಂಬಾತ ನಿನ್ನೆ ಸಂಜೆ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾನಿಪುರಿ ವ್ಯಾಪಾರ ಮಾಡಿಕೊಂ ಡಿದ್ದ ಮಾರುತಿ, ಇತ್ತೀಚೆಗೆ ಆರೋಗ್ಯ ದಲ್ಲಿ ಸಮಸ್ಯೆ ಉಂಟಾಗಿ ಮಾನಸಿಕವಾಗಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ವ್ಯಕ್ತಿಯ ಮಗ ನಾಗರಾಜ್ ತಿಳಿಸಿದ್ದಾರೆ.
ನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶವ ಪತ್ತೆಗೆ ಗುತ್ತೂರು, ದೀಟೂರು, ಸಾರಥಿ ಹಾಗೂ ಚಿಕ್ಕಬಿದರಿ ಗ್ರಾಮದ ನದಿ ಪಾತ್ರದಲ್ಲಿ ಮುಂದಾಗಿದ್ದು, ನದಿಯಲ್ಲಿ ನೀರಿನ ರಭಸವು ಕಡಿಮೆ ಆದ ಮೇಲೆ ಪತ್ತೆ ಸಾಧ್ಯವಾಗುತ್ತದೆ ಎಂದು ಅಗ್ನಿಶಾಮಕ ಠಾಣೆ ಪಿಎಸ್ಐ ಸಂಜೀವ್ ಕುಮಾರ್ ಹೇಳಿದರು. ಸ್ಥಳದಲ್ಲಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ದೇವಾನಂದ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.