ಸರ್ಕಾರಿ ಶಾಲೆಗೆ ಜಮೀನು ದಾನ ಮಾಡಿದ್ದ ಮೊಹ್ಮದ್ ಯಾಕೂಬ್ ಸಾಬ್ ನಿಧನ

ಸರ್ಕಾರಿ ಶಾಲೆಗೆ ಜಮೀನು ದಾನ ಮಾಡಿದ್ದ ಮೊಹ್ಮದ್ ಯಾಕೂಬ್ ಸಾಬ್ ನಿಧನ

ದಾವಣಗೆರೆ, ಜು.18- ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ಅಲ್ಹಾಜ್ ಕೆ. ಮೊಹ್ಮದ್ ಯಾಕೂಬ್ ಸಾಬ್ ಅವರು ತಮಗೆ ಸೇರಿದ್ದ ಜಮೀನನ್ನು ಶಾಲೆಗೆ ದಾನ ಮಾಡುವುದರ ಮೂಲಕ ಶಿಕ್ಷಣ ಪ್ರೇಮ ಮೆರೆದಿದ್ದಾರೆ.

ನಗರದ ಎಂ.ಸಿ. ಕಾಲೋನಿ `ಬಿ’ ಬ್ಲಾಕ್‌ ಈಜುಕೊಳದ ಹತ್ತಿರದಲ್ಲಿ ವಾಸವಾಗಿದ್ದ ಅವರು, ತಮ್ಮ ಹೆಸರಿನಲ್ಲಿದ್ದ ಸುಮಾರು 1 ಕೋಟಿ ರೂ. ಬೆಲೆ ಬಾಳುವ ಜಮೀನಿನನ್ನು ಸಂತೇಬೆನ್ನೂರಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ದಾನ ಮಾಡಿರುವುದು ಶ್ಲ್ಯಾಘನೀಯ.

ಸಂತೇಬೆನ್ನೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮನವಿಗೆ ಸ್ಪಂದಿಸಿದ ಮೊಹ್ಮದ್ ಯಾಕೂಬ್ ಸಾಬ್ ಅವರು, ವಿದೇಶದಲ್ಲಿರುವ ತಮ್ಮ ಪುತ್ರರನ್ನು ಸ್ವದೇಶಕ್ಕೆ ಕರೆಸಿಕೊಂಡು ಜಮೀನನ್ನು ಶಾಲೆ ಹೆಸರಿಗೆ ನೋಂದಣಿ ಮಾಡಿಸಿಕೊಡುವುದರೊಂದಿಗೆ ಮಾದರಿಯಾಗಿದ್ದಾರೆ.

ಮೊಹ್ಮದ್ ಯಾಕೂಬ್ ಸಾಬ್ ಅವರು ನಿನ್ನೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ ಸ್ಥಳೀಯ ಹಳೇ ಖಬರಸ್ತಾನದಲ್ಲಿ ನೆರವೇರಿತು.  ಮೃತರ ನಿವಾಸಕ್ಕೆ ಆಗಮಿಸಿದ್ದ ಗಣ್ಯರು, ಬಂಧುಗಳು ಅವರ ಅಂತಿಮ ದರ್ಶನ ಪಡೆದು, ಅವರ  ವ್ಯಕ್ತಿತ್ವ, ದಾನ – ಧರ್ಮ, ಸಾಮಾಜಿಕ ಸೇವೆಯನ್ನು ಕೊಂಡಾಡಿದರು.

error: Content is protected !!