ದಾವಣಗೆರೆ, ಜು.18- ವಿಶ್ವ ಮಧ್ವ ಮಹಾಪರಿಷತ್ ವತಿಯಿಂದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಶೇ.90 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನಗರದ ಪಿ.ಜೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪರಿಷತ್ ಶಾಖೆಯಲ್ಲಿ ಅರ್ಜಿ ಲಭ್ಯವಿದ್ದು, ಇದೇ ದಿನಾಂಕ 25 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮಾಹಿತಿಗಾಗಿ 9900153953, 9481865146 ಸಂಪರ್ಕಿಸಿ.
December 22, 2024