ದಾವಣಗೆರೆ, ಜು. 12- ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಎಜುಕೇಶನಲ್ ಟ್ರಸ್ಟ್ ಇವರ ವತಿಯಿಂದ ನಾಡಿದ್ದು ದಿನಾಂಕ 14 ರಂದು ಬೆಳಿಗ್ಗೆ 10.30 ಕ್ಕೆ ಡಾ. ಮಹಾಂತಸ್ವಾಮಿ ಪದವಿ ಪೂರ್ವ ಕಾಲೇಜಿನ ಉದ್ಘಾಟನೆ, ಪಂಚಮಸಾಲಿ ಸಮಾ ಜದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಬಿ.ಸಿ. ಉಮಾಪತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ವಹಿಸಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್ಪಿ ಉಮಾ ಪ್ರಶಾಂತ್, ಆಯುಕ್ತೆ ರೇಣುಕಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ. ಕರಿಸಿದ್ಧಪ್ಪ, ಪಾಲಿಕೆ ಸದಸ್ಯೆ ಹೆಚ್.ಆರ್. ಶಿಲ್ಪಾ ಜಯಪ್ರಕಾಶ್ ಮತ್ತಿತರೆ ಗಣ್ಯರು ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಡಾ.ಎಸ್.ಎಂ. ಎಲಿ, ಉದ್ಯಮಿ ಎಸ್.ಕೆ ವೀರಣ್ಣ, ಎನ್.ಸಿ. ಅಜ್ಜಯ್ಯ ನಾಡಿಗೇರ್, ಐ.ಎಸ್. ಪ್ರಸನ್ನಕುಮಾರ್ ಆರಾಧ್ಯ, ಪೀಠದ ಹರಿಹರದ ಆಡಳಿತಾಧಿಕಾರಿ ಡಾ.ಹೆಚ್.ಪಿ. ರಾಜ್ ಕುಮಾರ್ ಅವರನ್ನು ಸನ್ಮಾನಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಕೆ. ಶ್ರೀಧರ್, ವಾಣಿ ಶಿವಣ್ಣ, ಎಂ. ದೊಡ್ಡಪ್ಪ, ಅಂದನೂರು ಮುರುಗೇಶ್, ಅಂದನೂರು ಆನಂದಕುಮಾರ್, ಕೆ.ಎನ್. ರಾಜಶೇಖರ್ ಬಾದಾಮಿ ಜಯ್ಯಣ್ಣ, ಕಂಚಿಕೆರೆ ಮಹೇಶ್, ಕೆ. ಶಿವಕುಮಾರ್, ಹೆಚ್.ಎಂ. ನಾಗರಾಜ್, ಹೆಚ್.ಎಸ್. ಅವ್ವಣ್ಣಪ್ಪ ಉಪಸ್ಥಿತರಿದ್ದರು.