ದಾವಣಗೆರೆ, ಜು. 11 – ಚಂದ್ರದರ್ಶನದಿಂದ ಪ್ರಾರಂಭವಾಗಿರುವ ಮುಸ್ಲಿಂ ಬಾಂಧವರ ಹೊಸ ವರ್ಷದ ಸಂಕೇತವಾಗಿರುವ ಮೊಹರಂ ಹಬ್ಬದ `ಯಾದೇ ಹುಸೇನ್’ ಅಂಗವಾಗಿ ಕೆ.ಆರ್.ರಸ್ತೆಯಲ್ಲಿರುವ ನೂರಾನಿ ಆಟೋ ಚಾಲಕರ ಸಂಘದ ಆಶ್ರಯದಲ್ಲಿ 10 ದಿನಗಳವರೆಗೆ ಮೊಹರಂ ತಖರೀರ್ (ಉಪನ್ಯಾಸ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೌಲಾನಾ ಮುಫ್ತಿ ಮಹಮ್ಮದ್ ಆಹಮದ್ ಅಶ್ರಫ್ ಅವರು ಉಪನ್ಯಾಸ ನೀಡುವರು. ಅಲ್ಹಾಜ್ ಅಲ್ಲಾವಲ್ಲಿ ಇನಾಯತ್ ಉಲ್ಲಾ ಖಾನ್ ಅವರು ಅಧ್ಯಕ್ಷತೆ ವಹಿಸುವರು. ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ನಗರದ ಉಲೇಮಾಗಳು ಪಾಲ್ಗೊಳ್ಳುವರು. ಮಹಿಳೆಯರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಪತಾ ಅಬ್ದುಲ್ ರಹಮಾನ್ ತಿಳಿಸಿದ್ದಾರೆ.
January 11, 2025