ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹರಿಹರ ತಾಲ್ಲೂಕು ಆಂಗ್ಲ ಭಾಷಾ ಬೋಧಕರ ವೇದಿಕೆ ವತಿಯಿಂದ ತರಬೇತಿ ಕಾರ್ಯಾ ಗಾರವನ್ನು ಇಂದು ಬೆಳಗ್ಗೆ 10-30ಕ್ಕೆ ಶಾಲೆಯ ಉಪ ಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ ಮತ್ತು ದಾವಣಗೆರೆಯ ಡಯಟ್ ಅಧಿಕಾರಿ ಗಳು ಆಗಮಿಸಲಿದ್ದು, ಆಂಗ್ಲ ಭಾಷೆ ವೇದಿಕೆ ಅಧ್ಯಕ್ಷ ಸುರೇಶ್ ಎಸ್. ಮೂಲಿ ಮನಿ ಮತ್ತು ಕ್ಲಬ್ನ ಪದಾಧಿಕಾರಿಗಳು ಈ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.
January 23, 2025