ದಾವಣಗೆರೆ, ಜು. 9- ಇಡೀ ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ `ಡೆಂಗ್ಯೂ’ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾಮಾಜಿಕ ಸೇವಾ ಕಾರ್ಯಕರ್ತ ಹೆಲ್ಪ್‌ಲೈನ್ ಸುಭಾನ್ ಒತ್ತಾಯಿಸಿದ್ದಾರೆ.
ಡೆಂಗ್ಯು ಪ್ರಕರಣದಿಂದಾಗಿ ಅನೇಕ ಸಾವು-ನೋವುಗಳು ಸಂಭವಿಸಿದ್ದು, ಈ ಪ್ರಕರಣದಲ್ಲಿ ಮಕ್ಕಳೇ ಹೆಚ್ಚು ಬಲಿಯಾಗುತ್ತಿದ್ದಾರೆ.
ಸರ್ಕಾರ ಈಗಾಗಲೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸ್ವಚ್ಛತಾ ಕಾರ್ಯಕ್ರಮವನ್ನು ಅನುಸರಿಸುತ್ತಾ, ಚರಂಡಿಗಳಲ್ಲಿ ಕೀಟನಾಶಗಳನ್ನು ಸಿಂಪಡಿಸುವ ಕೆಲಸವನ್ನು ಮಾಡುತ್ತಿದೆ. ಆದರೂ ಡೆಂಗ್ಯೂ ಜ್ವರ ತನ್ನ ತಾಂಡವವನ್ನು ನಿಲ್ಲಿಸಿಲ್ಲ. ಮಕ್ಕಳು ಬಲಿಯಾಗುತ್ತಲೇ ಇದ್ದಾರೆ. ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಹಾಗೂ ಸೊಳ್ಳೆ ನಿಯಂತ್ರಣ ಮಾಡುವ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.