ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಮತ್ತು ಬವಣೆಗಳ ಸಂಕಥನದ ಗೋರ್ಮಾಟಿ ಎಂಬ ನಾಟಕ ಮೈಸೂರಿನ ರಂಗಾಯಣ ಹಾಗೂ ಬಂಜಾರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಇವರುಗಳ ಸಂಯುಕ್ತಾಶ್ರಯಲ್ಲಿ ಇಂದು ಸಂಜೆ 6ಕ್ಕೆ ಶ್ರೀಮತಿ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಶಿರಗಾನಹಳ್ಳಿ ಶಾಂತನಾಯ್ಕ ಅವರು ರಂಗರೂಪ ನೀಡಿರುವ ಈ ನಾಟಕಕ್ಕೆ, ಶಶಿಧರ್ ಹಡಪ ಅವರ ರಂಗ ವಿನ್ಯಾಸವಿದ್ದು, ಪ್ರಮೋದಿ ಶಿಗ್ಗಾಂವ್ ಹಾಗೂ ಶಶಿಕಲಾ ಬಿ.ಎನ್ ವಸ್ತು ವಿನ್ಯಾಸವಿದೆ. ಕೃಷ್ಣಕುಮಾರ್ ನಾರ್ಣಕಜೆ ಬೆಳಕಿನ ನಿರ್ದೇಶನ, ಗೀತಾ ಮೋಂಟಡ್ಕ ಅವರು ರಂಗ ನಿರ್ವಹಣೆ, ನಂದಿನಿ ಕೆ.ಆರ್. ಸಹ ನಿರ್ದೇಶನ ಇರುವ ಈ ನಾಟಕಕ್ಕೆ ಸಿ. ಬಸವಲಿಂಗಯ್ಯ ಅವರ ಸಂಗೀತ ಮತ್ತು ನಿರ್ದೇಶನ ಮಾಡಲಿದ್ದಾರೆ.