ರಾಣೇಬೆನ್ನೂರು ತಾಲ್ಲೂಕಿನ ಐರಣಿ ಹೊಳೆ ಮಠದ ಶ್ರೀ ಸದ್ಗುರು ಮುಪ್ಪಿನಾರ್ಯ ಮಹಾತ್ಮಾಜಿ ಯವರ 40ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಇಂದು ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಸ್ವಾಮೀಜಿ ವಹಿಸುವರು. ಬರುವ ನ. 28 ರಿಂದ 3 ದಿನಗಳ ಕಾಲ ಶ್ರೀ ಕ್ಷೇತ್ರ ಕೋಣನತಲೆ ಯಲ್ಲಿ ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಮಹಾತ್ಮಾಜಿಯವರ ಪಟ್ಟಾಭಿ ಷೇಕದ 47ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಜರುಗಲಿವೆ.
December 29, 2024