ನ್ಯಾಮತಿ, ಜೂ.24- ಹರಿಹರ, ಹೊನ್ನಾಳಿ, ಭದ್ರಾವತಿ, ಶಿವಮೊಗ್ಗ, ಸಾಗರ, ದಾವಣಗೆರೆ ಘಟಕಗಳ ಎಲ್ಲಾ ತಡೆರಹಿತ ಬಸ್‍ಗಳು ಸೋಮವಾರದಿಂದ ಚೀಲೂರು ಮತ್ತು ಗೋವಿನಕೋವಿ ಗ್ರಾಮಗಳಲ್ಲಿ ನಿಲುಗಡೆ ಮಾಡಲಿವೆ.
ತಾಲ್ಲೂಕಿನ ಗೋವಿನ ಕೋವಿ ಮತ್ತು ಚೀಲೂರು ಗ್ರಾಮಗಳಿಂದ ಶಿವಮೊಗ್ಗಕ್ಕೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಡೆ ರಹಿತ ಬಸ್‍ಗಳ ನಿಲುಗಡೆಗೆ ಒತ್ತಾಯಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಶಾಸಕ ಡಿ.ಜಿ.ಶಾಂತನಗೌಡ ಅವರಿಗೂ ಮನವಿ ಮಾಡಿದ್ದರು.
ಈ ಕುರಿತು ಶಾಸಕರು ಸಮಸ್ಯೆ ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರ ಹಿನ್ನೆಲೆಯಲ್ಲಿ ಇದೀಗ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೊನ್ನಾಳಿ ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕ ಕೆ.ಮಹೇಶ್ವರಪ್ಪ ತಿಳಿಸಿದ್ದಾರೆ.