ದಾವಣಗೆರೆ, ಜೂ.23- ಚಿಂತಕ ಎಂ. ಸಂತೋಷ್ ಕುಮಾರ್ ಅವರು ನ್ಯಾಷನಲ್ ಯೂತ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಮಾಜಿಕ ಕಳಕಳಿ, ಪರಿಸರ ಪ್ರೇಮ ಹಾಗೂ ಆರೋಗ್ಯ ಇಲಾಖೆಯಲ್ಲಿ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಆಗಿ ಮನೋರೋಗಿಗಳ ಸೇವೆಯನ್ನು ಗುರುತಿಸಿ ಏಷಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿ ಈ ಪ್ರಶಸ್ತಿ ಕೊಡಲು ನಿರ್ಧರಿಸಿದೆ. ಇದೇ ದಿನಾಂಕ 29ರಂದು ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಏಷಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ರೀಸರ್ಚ್ ಯೂನಿವರ್ಸಿಟಿ ತಿಳಿಸಿದೆ.
January 9, 2025