ಚುನಾವಣೆ ಸೋಲು : ನಾಳೆ ಕಾಂಗ್ರೆಸ್ ಆತ್ಮಾವಲೋಕನ ಸಭೆ

ರಾಣೇಬೆನ್ನೂರು, ಜೂ.16- ಹಾವೇರಿ – ಗದಗ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಸೋಲಿನ ಆತ್ಮಾವಲೋಕನ ಮಾಡಲು ರಾಣೇಬೆನ್ನೂರು ತಾಲ್ಲೂಕು ಕಾಂಗ್ರೆಸ್ ಪಕ್ಷದ ಸಭೆ ಮಂಗಳವಾರ ಬೆಳಿಗ್ಗೆ ನಡೆಯಲಿದೆ ಎಂದು ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದ್ದಾರೆ. ದಿನಾಂಕ 18 ರಂದು ನಡೆಯುವ ಈ ಸಭೆಯಲ್ಲಿ, ಶಾಸಕ ಪ್ರಕಾಶ್ ಕೋಳಿವಾಡ, ಅಭ್ಯರ್ಥಿ ಆನಂದ ಗಡ್ಡದೇವರಮಠ, ಮಾಜಿ ಸಚಿವ ಆರ್. ಶಂಕರ್ ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಂಜನಗೌಡ  ತಿಳಿಸಿದ್ದಾರೆ. 

error: Content is protected !!