ಅಗಲಿದ ಗುರುವಿಗೆ ಜೆಂಬಿಗಿ ಮೃತ್ಯುಂಜಯ ಕಂಬನಿ

ದಾವಣಗೆರೆ, ಜೂ. 6- ಪ್ರೀತಿಯ ಹಾಗೂ ಆತ್ಮೀಯ ಅಭಿಮಾನದ  ಗುರುಗಳಾಗಿದ್ದ ಡಾ. ಎಂ.ಜಿ. ಈಶ್ವರಪ್ಪ ಅವರ ಅಗಲಿಕೆ ನನ್ನಲ್ಲಿ ಅಪಾರ ನೋವುಂಟು ಮಾಡಿದೆ. ಅವರು ತಮ್ಮ ಕಾರ್ಯವೈಖರಿ ಮತ್ತು ಆದರ್ಶ ಜೀವನದ ರೀತಿ ಯಿಂದ ಎಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದರು ಎಂದು ಕನ್ನಡ ಉಪನ್ಯಾಸಕರೂ ಆಗಿರುವ ಸಾಹಿತಿ ಜೆಂಬಿಗಿ ಮೃತ್ಯುಂಜಯ ಕಂಬನಿ ಮಿಡಿದಿದ್ದಾರೆ.

ತಾಳ್ಮೆ, ವೈಚಾರಿಕತೆಯಿಂದ ಪ್ರತಿಮಾ ಸಭಾವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ತಮ್ಮ ಜೀವನದಲ್ಲಿ ಪ್ರತಿಯೊಂದರಲ್ಲೂ ಸಂತೋಷ ಕಂಡಿದ್ಧ ಅವರು ಬಹು ದೊಡ್ಡ ಮಟ್ಟಕ್ಕೆ ಬೆಳೆದಿದ್ದರು. ತಮ್ಮ ಅನುಭವ ಹಾಗೂ ಜೀವನಧಾರೆಯ ಕಂಡುಂಡ ಸತ್ಯವನ್ನು ಶಿಷ್ಯರಿಗೆ ಧಾರೆಯೆರೆದಿದ್ದಾರೆ. ಕನ್ನಡಮ್ಮನ ಸೇವೆ ಮಾಡಿದ್ದಾರೆ. ತಮ್ಮ ಬಳಿ ಬರುವವರಿಗೆ ಸಲಹೆ ಸೂಚನೆ ಮಾರ್ಗದರ್ಶನ ಮಾಡಿ ಸ್ಫೂರ್ತಿ ತುಂಬಿದ್ದರು ಎಂದು ಜೆಂಬಿಗಿ ಮೃತ್ಯುಂಜಯ ತಿಳಿಸಿದರು.

ಸಮಾಜ, ಸಾಹಿತ್ಯ ಸೇವೆಯನ್ನು ಮಾಡುತ್ತಾ ಗಟ್ಟಿತನದಿಂದ ಬಾಳಿ ಬದುಕಿದ್ದರು. ಯಾವುದೇ ಅಪೇಕ್ಷೆ ಇಲ್ಲದೇ ಸಮಾಜ ಸೇವಾಕಾರ್ಯಕ್ಕೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದರು. ಈಗ ನಮ್ಮಿಂದ ದೂರವಾಗಿ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಜೆಂಬಿಗಿ ಮೃತ್ಯುಂಜಯ ಪ್ರಾರ್ಥಿಸಿದ್ದಾರೆ.

error: Content is protected !!