ನಗರದ ಜೈನ್ ಕಾಲೇಜಿನ ಫಲಿತಾಂಶ

ನಗರದ ಜೈನ್ ಕಾಲೇಜಿನ ಫಲಿತಾಂಶ

ದಾವಣಗೆರೆ, ಜೂ. 2- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮೇ 2024 ರಲ್ಲಿ ನಡೆಸಿದ ಅಂತಿಮ ವರ್ಷದ ಎಂಟನೇ ಸೆಮಿಸ್ಟರ್ ನ ಪರೀಕ್ಷೆಯಲ್ಲಿ ನಗರದ  ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. 

ಸಿವಿಲ್ ಇಂಜಿನಿಯರಿಂಗ್ (89.92%), ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (100%), ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (98.98%), ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ (96.87%) ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ (100%) ಫಲಿತಾಂಶ ಪಡೆದಿದ್ದಾರೆ. 

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಎಂಟನೇ ಸೆಮಿಸ್ಟರ್ ನ ವಿದ್ಯಾರ್ಥಿ ಮಲ್ಲಿಕಾರ್ಜುನ್ ಎಂ. ಪರೀಕ್ಷೆಯಲ್ಲಿ 5ನೇ ರಾಂಕ್ ಗಳಿಸಿದ್ದಾರೆ.

error: Content is protected !!