ನಗರದ ದೃಶ್ಯಕಲಾ ಕಾಲೇಜಿನಲ್ಲಿ ಇಂದು ಭಿತ್ತಿಚಿತ್ರ ಶಿಬಿರ

ದೃಶ್ಯಕಲಾ ಮಹಾವಿದ್ಯಾಲಯದ ವತಿಯಿಂದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ 7 ದಿನಗಳ ಭಿತ್ತಿಚಿತ್ರ ಕಲಾ ಶಿಬಿರದಲ್ಲಿ ಇಂದು ಮುಂಜಾನೆ 6.30ಕ್ಕೆ ದೃಶ್ಯಕಲಾ ಮಹಾವಿದ್ಯಾಲ ಯದ ಬೋಧನಾ ಸಹಾಯಕ ಎಸ್.ಹೆಚ್. ಹರೀಶ್ ಅವರು ಧ್ವಜಾರೋಹಣ ನೆರವೇರಿಸುವರು.

ಸಂಜೆ 5.30ರ ಕಾರ್ಯಕ್ರಮದಲ್ಲಿ `ಪ್ರತಿಭೆ ಮತ್ತು ಕಲಾಭಿವ್ಯಕ್ತಿ’ ವಿಷಯ ಕುರಿತು ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಂತೇಶ್ ಪಾಟೀಲ ಅವರು ಉಪನ್ಯಾಸ ನೀಡುವರು.  ಚಿತ್ರ ಕಲಾವಿದ ಚಂದ್ರಶೇಖರ ಸಂಗಾ ಅವರು ಮುಖ್ಯ ಅತಿಥಿಯಾಗಿದ್ದಾರೆ.

error: Content is protected !!