ನಗರದಾದ್ಯಂತ 2000 ಗಿಡ ನೆಡಲು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಗುರಿ

ದಾವಣಗೆರೆ,ಮೇ 27-  ಈ ವರ್ಷ  ನಗರದಾದ್ಯಂತ 2000 ಗಿಡ ನೆಡಲು ಉದ್ದೇಶಿಸಿದ್ದು,  ನಗರದ ಐದು ಲಕ್ಷ ಜನರೂ  ಕೈಜೋಡಿಸುವಂತೆ  ಕರುಣಾ ಪ್ರಕೃತಿ, ಕ್ಲೀನ್ ಅಂಡ್ ಗ್ರೀನ್ ಸಂಸ್ಥೆಗಳು ಮನವಿ ಮಾಡಿವೆ. ಮರಗಳನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದರಲ್ಲಿ ಸಾರ್ವಜನಿಕ ಹಿತದೃಷ್ಟಿ ಇರುವುದರಿಂದ  ನಗರದ ಜನತೆ ತಮ್ಮ ಮನೆಯ ಮುಂದೆ ಗಿಡಗಳನ್ನು ಬೆಳೆಸುವ ಪರಿಸರ ಪ್ರೇಮದ  ಕೆಲಸಕ್ಕೆ ಸಹಕರಿಸಬೇಕು. ಮಹಾನಗರ ಪಾಲಿಕೆಯು ಮನೆಗೆರಡು ಮರ ಕಡ್ಡಾಯ ಮಾಡಿ ರೆಜಲ್ಯೂಷನ್ ಕೂಡಾ ಪಾಸ್ ಮಾಡಿದೆ.  ಹಾಗಾಗಿ  ಪರಿಸರ ಪ್ರೇಮಿಗಳು ಮತ್ತು ಸಂಘಗಳ ಜೊತೆಗೂಡಿ ದಾವಣಗೆರೆ ನಗರವನ್ನು `ಕ್ಲೀನ್ ಅಂಡ್ ಗ್ರೀನ್’ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ.   ಗಿಡಗಳನ್ನು ಹಾಕಲು ಬಯಸುವ ಸಾರ್ವಜನಿಕರು ಈ ಕೆಳಗಿನ  ವ್ಯಕ್ತಿಗಳನ್ನು ಸಂಪರ್ಕಿಸಬಹುದು. 

ಕೊಟ್ರೇಶ್ವರ್, ನಿವೃತ್ತ ಅರಣ್ಯಾಧಿಕಾರಿ- (9886845450),   ಉದಯ್ ಕುಮಾರ್, ಕರುಣಾ   ಟ್ರಸ್ಟ್ – (9844112518),  ಸಿ.ಜಿ. ದಿನೇಶ್, ಅನ್‌ಮೋಲ್ ಶಾಲೆ ಅಧ್ಯಕ್ಷ-  (9448375666)   ಭರಮಪ್ಪ,    ನಿವೃತ್ತ     ಬಿಇಒ-  (9900369585)  ಡಾ. ಶಶಿಧರ್ ತವಣೆ –   (9535259350)  ಜಯ್ಯಣ್ಣ, ಕರುಣಾ ಟ್ರಸ್ಟ್-   (8748833814)  ಮಂಜುಳಾ ಬಸವಲಿಂಗಪ್ಪ, ಸ್ನೇಹ ಬಳಗ-   (7483809312)   ಜಬೀವುಲ್ಲಾ , ಪರಿಸರಕ್ಕಾಗಿ ನಾವು- (9880830092) ವಸಂತ್, ಕರುಣಾ ಟ್ರಸ್ಟ್ –  (9845240502)  ಮತ್ತು ಲಿಂಗರಾಜ್, ಕರುಣಾ ಟ್ರಸ್ಟ್- (9538024422).  

error: Content is protected !!