ದಾವಣಗೆರೆ, ಮೇ 25- ನಗರಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಬೈಪಾರ್ ರಸ್ತೆಯಲ್ಲಿ ಎಸ್.ಎಸ್. ಆಸ್ಪತ್ರೆ ಹತ್ತಿರದ ರೈಲ್ವೇ ಹಳಿ ಬ್ರಿಡ್ಜ್ ಬಳಿ ವ್ಯಕ್ತಿಯನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರಿಂದ 22 ಸಾವಿರ ರೂ. ಬೆಲೆಯ ವಿವೋ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಬಸಾಪುರ ಗ್ರಾಮದ ಗಾರೆ ಕೆಲಸ ಮಾಡುವ ಗಣೇಶ್ ಎಸ್., ಮನುಕುಮಾರ, ಹೃತಿಕ ಸಿ. ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಬಂಧಿತರು.
ಕಳೆದ ಏ.7ರಂದು ಎಸ್.ಓ.ಜಿ. ಕಾಲೋನಿ ಕಾಲೋನಿಯ ಮಲ್ಲಿಕಾರ್ಜುನ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ, ಪಿಎಸ್‌ಐ ಎಂ.ಎಸ್. ಹೊಸಮನಿ, ಹಾಗೂ ಸಿಬ್ಬಂದಿಗಳಾದ ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ ಬಿ. ನಾಯ್ಕ, ಲಕ್ಷ್ಮಣ್ ಆರ್, ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯಾದ ರಾಘವೇಂದ್ರ, ಶಾಂತರಾಜ್ ಮತ್ತು ಕಮಾಂಡ್ ಸೆಂಟರ್ ಸಿಬ್ಬಂದಿಗಳಾದ ಮಾರುತಿ, ಸೋಮು ಆರೋಪಿ ಪತ್ತೆ ಕಾರ್ಯದಲ್ಲಿದ್ದರು.