ರಾಜ್ಯ ಶಿಕ್ಷಣ ನೀತಿ ಸ್ವಾಗತಾರ್ಹ : ಡಾ. ಕುಬೇರಪ್ಪ

ರಾಜ್ಯ ಶಿಕ್ಷಣ ನೀತಿ ಸ್ವಾಗತಾರ್ಹ : ಡಾ. ಕುಬೇರಪ್ಪ

ದಾವಣಗೆರೆ, ಮೇ 16- ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ, ರಾಜ್ಯದ ನೂತನ ಶಿಕ್ಷಣ ನೀತಿಯನ್ನು ಸ್ವಾಗತಿಸುವುದಾಗಿ ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.

ಬಿಜೆಪಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ 4 ವರ್ಷದ ಪದವಿ ಮತ್ತು ಅವೈಜ್ಞಾನಿಕ ಕ್ರೆಡಿಟ್ ಬ್ಯಾಂಕ್ ನಿರ್ಮಿಸಿ ಉನ್ನತ ಶಿಕ್ಷಣದ ಮಾನ ಹರಾಜು ಗೊಳಿಸಿದ್ದಾರೆ.

ಎನ್ಇಪಿ ಶಿಕ್ಷಣ ನೀತಿ ಜಾರಿಯಾದ ಮೇಲೆ ಅಧ್ಯಾಪಕರಿಗೆ ವಿ.ವಿ ಪಠ್ಯಕ್ರಮ ಹೊರತು ಪಡಿಸಿದರೆ ಪಾಠ ಮಾಡಲು ಒಂದು ಪುಸ್ತಕವು ಪೂರೈಕೆಯಾಗಲಿಲ್ಲ ಮತ್ತು ಮಕ್ಕಳಿಗೆ ಅಭ್ಯಾಸ ಮಾಡಲು ಪಠ್ಯಪುಸ್ತಕ ಸಿಗದಿದ್ದಲ್ಲಿ ಯೂಟ್ಯೂಬ್‌, ಗೂಗಲ್‌ ಸಹಾಯದಿಂದ ಅಭ್ಯಾಸ ಮಾಡುವ ದುಸ್ಥಿತಿ ಉನ್ನತ ಶಿಕ್ಷಣಕ್ಕೆ ಬಂದಿತ್ತು ಎಂದರು.

ಎನ್ಇಪಿ ಶಿಕ್ಷಣ ನೀತಿಯಲ್ಲಿ ಪದವಿ ಮುಗಿಸಿದ ಯಾವ ವಿದ್ಯಾರ್ಥಿಗಳಿಗೂ ಇದು ವರೆಗೆ ಓರಿಜನಲ್ ಮಾರ್ಕ್ಸ್‌ ಕಾರ್ಡ್ ದೊರೆತಿಲ್ಲ ಎಂದು ಸಂಕನೂರ್‌ ಅವರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಕರಡು ಪ್ರತಿ ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡದೇ ಶೈಕ್ಷಣಿಕ ಮಂಡಳಿ ಅಭಿಪ್ರಾಯವೂ ಸ್ವೀಕರಿಸಲಿಲ್ಲ ಮತ್ತು  ಆಯಾ ರಾಜ್ಯಗಳ ಸದನಗಳಲ್ಲಿ ಚರ್ಚಿಸದೇ ದಿಢೀರ್‌ನೇ ಎಲ್ಲಾ ರಾಜ್ಯಗಳಲ್ಲೂ ಎನ್‌ಇಪಿ ಜಾರಿ ಗೊಳಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಸರಿಯಾಗಿ ಮಾಹಿತಿ ಇಲ್ಲದ ಎಬಿವಿಪಿ ಹುಡುಗರನ್ನು ಶಿಕ್ಷಣದ ವ್ಯವಸ್ಥೆ ವಿರುದ್ಧ ಎತ್ತಿ ಕಟ್ಟುವುದು ಅತ್ಯಂತ ಪಾಪದ ಕೆಲಸ. ಆದ್ದರಿಂದ ಕೆಲವರು ಹಠಮಾರಿತನದ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕೆಂದು ಡಾ. ಕುಬೇರಪ್ಪ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

error: Content is protected !!