ದಾವಣಗೆರೆ, ಮೇ 13- ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀ ಕರಣ ಇಲಾಖೆ ವತಿಯಿಂದ ವಿಕಲಚೇತನ ಯುವಕ, ಯುವತಿಯರಿಗೆ ಕೌಶಲ್ಯಾಭಿ ವೃದ್ಧಿ ತರಬೇತಿ ನೀಡಲಾಗು ವುದು. 18 ರಿಂದ 40 ವರ್ಷ ವಯೋಮಾನದ ವಿಕಲ ಚೇತನರು ಕಂಪ್ಯೂಟರ್ (ಡಾಟಾ ಎಂಟ್ರಿ ಆಪರೇ ಟರ್) ತರಬೇತಿ, ಮೊಬೈಲ್ ರಿಪೇರಿ, ತೋಟಗಾರಿಕೆ, ನರ್ಸರಿ ಇತ್ಯಾದಿ ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯಲ್ಲಿ ಊಟ, ವಸತಿ ಉಚಿತವಾಗಿ ನೀಡಲಾಗು ವುದು. ಮೇ 25 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹೊನ್ನಾಳಿ ಶೈಲಜಾ ಕೆ.ಎಂ.(9886366809), ಚನ್ನಗಿರಿಯ ಸುಬ್ರಮಣ್ಯಂ (9945738141), ಜಗಳೂರು ಎಂ. ಕೆ ಶಿವನಗೌಡ (9902105734), ಹರಿಹರ ಶಶಿಕಲಾ ಟಿ.(9945458058), ದಾವಣಗೆರೆ ಚನ್ನಪ್ಪ. ಬಿ (9590829024) ಸಂಪರ್ಕಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.