ಹಲಸಬಾಳು ಗ್ರಾಮದಲ್ಲಿ ಅಕ್ರಮ ಮರಳು ಸಾಗಾಟದ ಆರೋಪ

ಹರಿಹರ, ಏ. 2- ನಗರದ ಹೊರವಲಯದ ಹಲಸಬಾಳು ಗ್ರಾಮದಲ್ಲಿ ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ ಮಾಡುವುದನ್ನು ತಡೆಯಲು ಹೋದಾಗ ನನ್ನ ಮೇಲೆ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದ್ದು, ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಹೋದಾಗ, ಸಿಬ್ಬಂದಿಗಳು ನನ್ನ ಮೇಲೆ ಪ್ರಕರಣ  ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ತಾಲ್ಲೂಕು ಅಧ್ಯಕ್ಷ ಹಲಸಬಾಳು ಬಸವರಾಜ್ ಹೇಳಿದರು. 

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

 ಹಲಸಬಾಳು ಗ್ರಾಮದ ನದಿಯಲ್ಲಿ ರೇವಣಪ್ಪ, ಮಹಾಂತೇಶ್, ಚಂದ್ರಶೇಖರ್, ರಮೇಶ್, ಬಸವರಾಜ್, ಹರೀಶ್ ಮಾರುತಿ, ರಮೇಶ್  ಕಾನೂನು ಬಾಹಿರವಾಗಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದರು. ಇದನ್ನು ತಡೆಯಲು ಹೋದ ನನಗೆ ಅವಾಚ್ಯ ಶಬ್ದಗಳಿಂದು ನಿಂದಿಸಿ, ಪ್ರಾಣ ಬೆದರಿಕೆಯನ್ನು ಹಾಕಿದ್ದಾರೆ ಎಂದು ಬಸವರಾಜ್ ಆರೋಪಿಸಿದ್ದಾರೆ. 

ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸ ಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಡ್ಲಪರ ಸುರೇಶ್, ರವೀಂದ್ರ, ಮಹಮ್ಮದ್ ಯೂಸೂಫ್, ಮಲ್ಲೇಶ್ ಇತರರು ಹಾಜರಿದ್ದರು. 

error: Content is protected !!